ವಿರಾಟ್​ ಭಾಯ್​ ತಂಡದಲ್ಲಿ ಇದ್ದಿದ್ರೆ… ಸೂಪರ್​-8 ಪಂದ್ಯ ಸೋಲಿನ ಬೆನ್ನಲ್ಲೇ ‘ಕಿಂಗ್​’ ನೆನೆದ ಹಾರ್ದಿಕ್ ಭಾವುಕ ನುಡಿ​ | Hardik Pandya

ಅಹಮದಾಬಾದ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ 74 ರನ್‌ಗಳ ಭಾರಿ ಅಂತರದಿಂದ ಸೋಲುಂಡಿತು. ಟೀಮ್ ಇಂಡಿಯಾ ಸೋತ ಬೆನ್ನಲ್ಲೇ  ದಾಖಲೆಗಳ ಸರದಾರ, ಕಿಂಗ್ ಕೊಹ್ಲಿ ಹೆಸರು ನೆನಪಾಗಿದ್ದು ಆಗಿದ್ದು ನಿಜಕ್ಕೂ ವಿಶೇಷ.

ಅಸಲಿಗೆ ಭಾರತ ಸೋತಿದ್ದಕ್ಕೂ ವಿರಾಟ್​ ಹೆಸರು ಮುನ್ನೆಲೆಗೆ ಬಂದಿದ್ದಕ್ಕೂ ಒಂದು ಬಲವಾದ ಕಾರಣವಿದೆ.
ಟೀಮ್ ಇಂಡಿಯಾದ ದಿಗ್ಗಜ​ ಬ್ಯಾಟರ್​, ದಾಖಲೆಗಳ ಸರದಾರ, ರನ್​ಮಷಿನ್​ ವಿರಾಟ್​ ಕೊಹ್ಲಿ ಅವರನ್ನು ಅನೇಕ ಕ್ರಿಕೆಟ್​ ಅಭಿಮಾನಿಗಳು ಈ ಪಂದ್ಯದ ಸೋಲಿನ ಬಳಿಕ ನೆನಪಿಸಿಕೊಂಡರು. ಏಕೆ ನಾವು ಕಿಂಗ್ ಕೊಹ್ಲಿಯನ್ನು ಚೇಸ್​ಮಾಸ್ಟರ್​ ಎಂದು ಕರೆಯುತ್ತೇವೆ ಎಂಬುದನ್ನು ಈ ಸಂದರ್ಭ ಮುಂದಿಟ್ಟು ವಿವರಿಸಿದರು. ಇದೇ ಸಮಯದಲ್ಲಿ ತಂಡದಲ್ಲಿ ಕೊಹ್ಲಿ ಇದ್ದಿದ್ರೆ ನಮಗಿಂತ ಹೀನಾಯ ಸೋಲು ಬರುತ್ತಿತ್ತೇ? ಎಂದು ಅವರ ಹಳೆಯ ಇನ್ನಿಂಗ್ಸ್ ಅನ್ನು ಮುನ್ನೆಲೆಗೆ ತಂದರು.
ಹರಿಣರ ಪಡೆ ನೀಡಿದ 188 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ವಿಫಲರಾದರು. ಅಭಿಷೇಕ್ ಶರ್ಮ, ಸೂರ್ಯಕುಮಾರ್ ಯಾದವ್​, ಇಶಾನ್ ಕಿಶನ್​, ರಿಂಕು ಸಿಂಗ್​, ತಿಲಕ್ ವರ್ಮಾ, ಹಾರ್ದಿಕ್​ ಪಾಂಡ್ಯ ಸೇರಿ ಸ್ಟಾರ್​ ಬ್ಯಾಟರ್​ಗಳೇ ಒಂದಂಕಿ ರನ್ ಬಾರಿಸುವ ಮೂಲಕ ಪೆವಿಲಿಯನ್​ ಹಾದಿ ಹಿಡಿದರು. ಅದೇ, ಈ ತಂಡದಲ್ಲಿ ವಿರಾಟ್​ ಕೊಹ್ಲಿ ಇದ್ದಿದ್ರೆ, ಸವಾಲಿನ ಪರಿಸ್ಥಿತಿಯಲ್ಲೂ ಹೇಗೆ ಗೆಲುವಿನ ಪತಾಕೆ ಹಾರಿಸುತ್ತಿದ್ದರು ಎಂಬುದು ಒಂದು ನಿಮಿಷ ಕ್ರಿಕೆಟ್​ ಪ್ರಿಯರಲ್ಲಿ ಕಾಡಿದ್ದಂತು ಅಕ್ಷರಶಃ ನಿಜ. ಇದೇ ಅನುಭವ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ಗೂ ಆಯಿತು.
ಪಂದ್ಯ ಸೋಲಿನ ಬಳಿಕ ಮಾತನಾಡಿದ ಹಾರ್ದಿಕ್​ ಪಾಂಡ್ಯ, ನನಗೆ ಬೇರೆ ಆಟಗಾರರ ಬಗ್ಗೆ ಗೊತ್ತಿಲ್ಲ. ಆದರೆ, ವೈಯಕ್ತಿಕವಾಗಿ ನಾನಂತು ವಿರಾಟ್​ ಭಾಯ್​ ಅವರನ್ನು ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದೀನಿ. ಅವರು ಯಾವಾಗೆಲ್ಲ ತಂಡದಲ್ಲಿ ಇರುತ್ತಿದ್ದರೋ, ಆಗೆಲ್ಲ ತಂಡದ ಆತ್ಮವಿಶ್ವಾಸ ದಿಢೀರ್​ ಎಂಬಂತೆ ಏರುತ್ತಿತ್ತು. ಅವರೊಟ್ಟಿಗೆ, ಯಾರೇ ಬ್ಯಾಟ್​ ಮಾಡಿದರೂ ಖಂಡಿತ ಅವರಿಗೆ ಕೊಹ್ಲಿಯಿಂದ ಉತ್ತಮ ಸಾಥ್​ ಮತ್ತ ಆಟದ ಸ್ಪಷ್ಟತೆ ಸಿಗುತ್ತಿತ್ತು ಎಂದಿದ್ದಾರೆ.

Leave a Comment